Wednesday, September 11, 2019

ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋಧಕ


ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು᷾🌂


1761-1799 ರ ನಡುವಿನ ಕಾಲಘಟ್ಟದಲ್ಲಿ ಕರ್ನಾಟಕವನ್ನು ಆಳಿದವರು ಯಾರು?
 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು
 ಭಾರತದ ಚರಿತ್ರೆಯಲ್ಲಿ ಎಷ್ಟನೇ ಶತಮಾನವನ್ನು ‘ರಾಜಕೀಯ ಸಮಸ್ಯೆಗ¼ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ.
 18ನೇ ಶತಮಾನ
 ಭಾರತದ ಚರಿತ್ರೆಯಲ್ಲಿ 18 ನೇಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಅನೇಕ ಕಾರÀಣವೇನು?
 ಮೊಘಲ್‍ಚಕ್ರವರ್ತಿ ಔರಂಗಜೇಬ್‍ನ ಮರಣ (1707)
 ಮೈಸೂರು ರಾಜ್ಯದ ಚಿಕ್ಕದೇವರಾಜ ಒಡೆಯರ ಮರಣ (1704)
 ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?
ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು.
 ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವಧರ್Àಮಾನಕ್ಕೆ ಬಂದನು.
 ಮೊದಲನೇ ಆಂಗ್ಲೋ ಮೈಸೂರು ಯುದ್ದವು 1767-69 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
 ಮದ್ರಾಸ್ -1769
 ಎರಡನೇ ಆಂಗ್ಲೋ ಮೈಸೂರು ಯುದ್ದವು 1780- 1784 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
 ಮಂಗಳೂರು - 1784
 ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
 ವಾರನ್ ಹೆಸ್ಟಿಂಗ್ಸ್
 ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಬ್ರಿಟಿಷ್ ಸೇನೆಯ ಸೇನಾನಾಯಕ ಯಾರು?
 ಐರ್‍ಕೂಟ್
 ಯಾವ ಯುದ್ದದ ನಂತರ ಹೈದರಾಲಿ ಮರಣ ಹೊಂದಿದನು?
 1782 ರಲ್ಲಿ ಪುಲಿಕಾಟ್ ಮತ್ತು ಸೋಲಿಂಗೂರ್‍ಗಳ ಕದನದ ನಂತರ ಮರಣ ಹೊಂದಿದನು.
 ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು?
ತಿರುವಾಂಕೂರು ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು
ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.
 ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.
ಮೂರನೆ ಆಂಗ್ಲೋ ಮೈಸೂರು ಯುದ್ದ  ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
 ಲಾರ್ಡ ಕಾರನ್‍ವಾಲೀಸ್
 ಮೂರನೆ ಆಂಗ್ಲೋ ಮೈಸೂರು ಯುದ್ದವು 1790-1792 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
 ಶ್ರೀರಂಗಪಟ್ಟಣ - 1792
ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು?
ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು
 ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು,
 ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು,
 ಯುದ್ಧದ  ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.
 ನಾಲ್ಕನೆ ಆಂಗ್ಲೋ ಮೈಸೂರು ಯುದ್ದ  ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
 ಲಾರ್ಡ ವೆಲ್ಲೆಸ್ಲಿ
 ಟಿಪ್ಪು ಸುಲ್ತಾನ್ ಮರಣ ಹೊಂದಿದ ವರ್ಷ?
 1799
 ಟಿಪ್ಪು ಮರಣದ ನಂತರ ಮೈಸೂರನ್ನು ಯಾರಿಗೆ ಹಸ್ತಾಂತರಿಸಲಾಯಿತು?
 3ನೇ ಕೃಷ್ಣರಾಜ ಒಡೆಯರ್
 ಕರ್ನಾಟಕದ ಪ್ರಮುಖ ಸಶಸ್ತ್ರ ಬಂಡಾಯಗಳು ಯಾವುವು?
 ದೋಂಡಿಯಾ ವಾಘ್ (1800)
 ಕಿತ್ತೂರಿನ ಬಂಡಾಯ - ವೀರರಾಣಿ ಚೆನ್ನಮ್ಮ (1824)
 ಸಂಗೊಳ್ಳಿ ರಾಯಣ್ಣ  (1829-30)
 ಅಮರ ಸುಳ್ಯ ಬಂಡಾಯ
 ಸುರಪುರ ಮತ್ತು ಕೊಪ್ಪಳ ಬಂಡಾಯ
 ಹಲಗಲಿಯ ಬೇಡರ ದಂಗೆ 
ದೋಂಡಿಯಾ ವಾಘ್ ಎಲ್ಲಿ ಜನಿಸಿದನು?
 ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು.
ದೋಂಡಿಯಾ ವಾಘ್ ದಂಗೆಯನ್ನು ನಿಯಂತ್ರಸಿದ ಗೌರ್ನರ್ ಜನರಲ್ ಯಾರು?
 ಲಾರ್ಡ್ ವೆಲ್ಲೆಸ್ಲಿ
 ದೋಂಡಿಯಾ ವಾಘ್ ಹತ್ಯೆಗೈದ ಸ್ಥಳ?
 ಕೋನ್‍ಗಲ್
 ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಲು ಕಾರಣವೇನು?
 ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿ
ಕಿತ್ತೂರಿನ ರಾಣಿ ಚೆನ್ನಮ್ಮ ದತ್ತು ಪಡೆದ ಮಗನ ಹೆಸರೇನು.
  ಶಿವಲಿಂಗಪ್ಪ
 ಕಿತ್ತೂರಿನ ಬಂಡಾಯದ ಸಮಯದಲ್ಲಿದ್ದ ಧಾರವಾಡದ ಕಲೆಕ್ಟರ್ ಮತ್ತು ಪೆÇಲಿಟಿಕಲ್ ಏಜೆಂಟನಾಗಿದ್ದನು ಯಾರು?
  ಥ್ಯಾಕರೆ
ಕಿತ್ತೂರಿನ ರಾಣಿ ಚೆನ್ನಮ್ಮನನ್ನು ಎಲ್ಲಿ ಬಂಧಿಸಿ ಇಡಲಾಗಿತ್ತು.
 ಬೈಲಹೊಂಗಲ ಕೋಟೆ
ಕಿತ್ತೂರು ರಾಣಿ ಚೆನ್ನಮ್ಮ__ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
 ಶಿವಲಿಂಗಪ್ಪ
ಕಿತ್ತೂರಿಗೆ ಮುತ್ತಿಗೆ ಹಾಕಿದ್ದ ಬ್ರಿಟಿಷ್ ಸೈನ್ಯದ ನಾಯಕ ಅಥವಾ ಲೆಫ್ಟಿನೆಂಟ್ ಯಾರು?
 ಲೆಫ್ಟಿನೆಂಟ್ ಕರ್ನಲ್ ಡೀಕ್
ಕಿತ್ತೂರಿನ ರಾಜ್ಯಾಡಳಿತದ ವಿಚಾರದಲ್ಲಿ ಥಾಮಸ್ ಮನ್ರೋವಿನ ಪಾತ್ರವೇನು?
ಶಿವಲಿಂಗರುದ್ರಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದ್ದನು.
ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ಆತನಿಗೆ ನೀಡಿದ್ದು ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು.
 ಈ ಒಪ್ಪಂದ ಥಾಮಸ್ ಮನ್ರೋನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತು.
ಸಂಗೊಳ್ಳಿ ರಾಯಣ್ಣ ಯಾರು?
ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದ ವೀರಯೋದ  ಕಿತ್ತೂರು ಸಂಸ್ಥಾನದ ಸೈನಿಕ
 ರಾಯಣ್ಣನನ್ನು ಬಂಧಿಸಲು ಬ್ರಿಟಿಷರು ರೂಪಿಸಿದ ಸಂಚು ಏನು?
 ಕಿತ್ತೂರಿನ ಚೆನ್ನಮ್ಮಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು.
ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈ ಜೋಡಿಸಿದನು.
ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು.
 ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
 1831ರಲ್ಲಿ ನಂದಗಡದಲ್ಲಿ ರಾಯಣ್ಣನ್ನು ಗಲ್ಲಿಗೇರಿಸಲಾಯಿತು.
ಅಮರ ಸುಳ್ಯ ಬಂಡಾಯ ಇದು ಮೂಲತಃ ಎಂತಹ  ಮಾದರಿಯ ಬಂಡಾಯ?
 ಇದು ಮೂಲತಃ ರೈತ ಬಂಡಾಯ
 ಅಮರ ಸುಳ್ಯ ಬಂಡಾಯವನ್ನು ಸಂಘಟಿಸಿದವರು ಯಾರು?
 ಕೊಡಗಿನಲ್ಲಿ ಸ್ವಾಮಿಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು.
 ಕೊಡಗನ್ನು ಆಳಿದ ಕೊನೆಯ ಅರಸ ಯಾರು?
 ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರ
 ‘ಅಮರ ಸುಳ್ಯ’ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು?
 ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು
 ಅಮರಸುಳ್ಯ ಬಂಡಾಯದ ವಿಚಾರದಲ್ಲಿ ಯಾರನ್ನು ಗಲ್ಲಿಗೇರಿಸಲಾಯಿತು.?
 ಪುಟ್ಟಬಸಪ್ಪ, ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿರಾಮಯ್ಯ ಗೌಡರು ಮತ್ತು ಗುಡ್ಡೆಮನೆ ಅಪ್ಪಯಗೌಡರು.
 ಸಶಸ್ತ್ರ ಬಂಡಾಯ ಸುರಪುರ ಈಗ ಯಾವ ಜಿಲ್ಲೆಯಲ್ಲಿದೆ?
 ಸುರಪುರ ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.
 1842ರಲ್ಲಿ ಬ್ರಿಟಿಷರು ಯಾರನ್ನು ಸುರಪುರದ ಪೊಲಿಟಿಕಲ್ ಏಜೆಂಟನನ್ನಾಗಿ ನೇಮಿಸಲಾಯಿತು?
 ಮೆಡೋಸ್ ಟೇಲರ್.
 ಸುರಪುರದ ಸಶಸ್ತ್ರ ಬಂಡಾಯದ ನಾಯಕನಾರು?
 ವೆಂಕಟಪ್ಪ ನಾಯಕ
 ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
ವೆಂಕಟಪ್ಪ ನಾಯಕ
 ಕೊಪ್ಪಳದ ಸಶಸ್ತ್ರ ಬಂಡಾಯದ ನಾಯಕನಾರು?
 ಕೊಪ್ಪಳದ ಜಮೀನ್ದಾರರಾಗಿದ್ದ  ವೀರಪ್ಪನವರು.
ಕೊಪ್ಪಳದ ಜಮೀನ್ದಾರನಾಗಿದ್ದ  ವೀರಪ್ಪನವರು ದಂಗೆ ಏಳಲು ಕಾರಣವೇನು?
ಹೈದರಾಬಾದ್ ನಿಜಾಮನ ದೌರ್ಜನ್ಯ ಆಡಳಿತದಿಂದ ಬೇಸತ್ತು ದಂಗೆ ಏಳಲು ಕಾರಣವಾಯಿತು.
 ಹಲಗಲಿಯ ಬೇಡರ ದಂಗೆಗೆ ಪ್ರಸಿದ್ದವಾಗಿದ್ದ ಹಲಗಲಿ ಈಗ ಯಾವ ಜಿಲ್ಲೆಯಲ್ಲಿದೆ?
 ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿದೆ🚤